ಕುರುಡು ಕಾಂಚಣ...

- ದ.ರಾ. ಬೇಂದ್ರೆ
ಕುರುಡು ಕಾಂಚಣ ಕುಣಿಯುತ್ತಲಿತ್ತು
ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ||

ಬಾಣನ್ತಿಯೆಲುಬ ಸಾ ಬಾನದ ಬಿಳುಪಿನ
ಕಾಣದ ಕಿರುಗೆಜ್ಜೆ ಕಾಲಾಗ ಇತ್ತು
ಸಣ್ಣ ಕಂದಮ್ಮಗಳ ಕಣ್ಣಿನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತು

ಬಡವರ ಒಡಲಿನ ಬಡಬಾ ನೆಲದಲ್ಲಿ
ಸುಡು ಸುಡು ಪಂಜು ಕೈಯೋಳಗಿತ್ತೋ
ಕಂಬನಿ ಕುಡಿಯುವ ಹುಂಬ ಬಾಯಿಲಿ ಮೈ
ದುಂಬಿಯಂತುಧೋ ಉಧೋ ಎನ್ನುತ್ತಲಿತ್ತೋ

ಕೂಲಿ ಕುಂಬಳಿಯವರ ಪಾಲಿನ ಮೈದೊಗಲ
ಧೂಳಿಯ ಭಂಡಾರ ಹನಿಯೊಳಗಿತ್ತೋ
ಗುಡಿಯೊಳಗೆ ಗಣ ನಾಮ ಹಡಿಯೊಳಗ ತನನ
ಅಂಗಡಿಯೊಳಗೆ ಝಾಣನ ನುಡಿಗೊಡುತಿತ್ತೋ

ಹ್ಯಾಂಗಾರೆ ಕುಣಿಕುಣಿದು ಮಂಗಾಟ ನಡೆದಾಗ
ಅಂಗಾತ ಬಿತ್ತೋ ಹೆಗಲಲ್ಲಿ ಎತ್ತೋ

Audio link:
http://www.kannadasongs.info/mp3_player/index.php?id=25975
Video link: Listen at 1:35
http://www.youtube.com/watch?v=avDQWlP4nF0
English lyrics:
http://www.madhurabhavageethegalu.blogspot.com/2012/08/kurudu-kanchana.html

1 comment:

  1. Can anyone knowledgeable explain this please?

    ReplyDelete

Note: Only a member of this blog may post a comment.