ಚೆಲ್ವಿ ಚೆಲ್ವಿ ಎಂದು...

- ಜನಪದ
ಚೆಲ್ವಿ ಚೆಲ್ವಿ ಎಂದು ಅತಿ ಆಸೆ ಪಡಬ್ಯಾಡ
ಚೆಲುವಿದ್ದರೇನು ಗುಣವಿಲ್ಲ ||
ಚೆಲುವಿದ್ದರೇನು ಗುಣವಿಲ್ಲ ಕೊಳೆನೀರು
ತಿಳಿಯಿದ್ದರೆನೂ ರುಚಿ ಇಲ್ಲ

ಕಪ್ಪು ಹೆಂಡತಿಯೆಂದು ಕಳವಳ ಪಡಬ್ಯಾಡ
ನೇರಳೆ ಹಣ್ಣು ಬಲು ಕಪ್ಪು
ನೇರಳೆ ಹಣ್ಣು ಬಲು ಕಪ್ಪು ಆದರು
ತಿಂದು ನೋಡಿದರೆ ರುಚಿ ಬಹಳ

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲು ಕೆಂಪು
ಅತ್ತಿಯ ಹಣ್ಣು ಬಲು ಕೆಂಪು ಇದ್ದರು
ಒಡೆದು ನೋಡಿದರೆ ಹುಳು ಬಹಳ

ಬಂಗಾರ ಬಳೆ ತೊಟ್ಟು ಬಡವರ ಬೈಬ್ಯಾಡ
ಬಂಗಾರ ನಿನಗೆ ಸ್ಥಿರವಲ್ಲ
ಬಂಗಾರ ನಿನಗೆ ಸ್ಥಿರವಲ್ಲ ಮಧ್ಯಾನ
ಸಂಜೆಯಾಗುವುದು ತಡವಲ್ಲ

Video link:
http://www.youtube.com/watch?v=t1mmYEiA-3c
English lyrics:
http://www.madhurabhavageethegalu.blogspot.com/2012/09/chelvi-chelvi-endu.html

No comments:

Post a Comment

Note: Only a member of this blog may post a comment.