ಹತ್ತು ವರ್ಷದ ಹಿಂದೆ...

- ಕೆ. ಎಸ್. ನರಸಿಂಹಸ್ವಾಮಿ
ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ ||
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈ ಹಿಡಿದವರು ನೀವಲ್ಲವೇ

ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟವರು ನೀವಲ್ಲವೇ
ಮಲ್ಲಿಗೆಯ ದಂಡೆಯನು ತುರುಬಿನಲಿ ಹಿಡಿದವರು
ತುಟಿಗೆ ತುಟಿ ತಂದವರು ನೀವಲ್ಲವೇ

ಕೈಗೆ ಬಳೆಯೇರದೇ ಅಯ್ಯೋ ನೋವೆಂದಾಗ
ಮಹಡಿಯಿಂದಿಳಿದವರು ನೀವಲ್ಲವೇ
ಬಳೆಗಾರ ಶೆಟ್ಟಿಯನು ಗದರಿಸಿಕೊಂಡವರು
ಬೆತ್ತವನು ತಂದವರು ನೀವಲ್ಲವೇ

ಸೆರಗೆಳೆದು ನಿಲ್ಲಿಸಿದ ಜಡೆಯೆಳೆದು ನೋಯಿಸಿದ
ಬಯಲು ಸೀಮೆಯ ಜಾಣ ನೀವಲ್ಲವೇ
ಮೊದಲಿರುಳು ಹೊಂಗನಸ ಮುನ್ನಿರ ದಾಟಿಸಿದ
ಬೆಳಕು ಬೆಡಗಿನ ಹಡಗು ನೀವಲ್ಲವೇ

ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗಿ ಮೆರೆವವರು ನೀವಲ್ಲವೇ
ಗಂಡನಿಗೆ ಒಪ್ಪಾಗಿ ಕಂದನಿಗೆ ದಿಕ್ಕಾಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ

Video link:  ( listen @ 20:21 for K.S. Chitra )
http://www.youtube.com/watch?v=jZ8PSe2mbQw 
Audio link:
http://musicmazaa.com/kannada/audiosongs/movie/Aathanka.html
English lyrics:
http://www.madhurabhavageethegalu.blogspot.com/2014/01/hattu-varushada-hinde.html

P.S: ಇದು ಸಂಪೂರ್ಣ ಪದ್ಯವಲ್ಲ. ಆದರೇ, ಹಂಸಲೇಖರವರ ಹಾಡಿನ ಪ್ರಕಾರವಾಗಿದೆ. 

No comments:

Post a Comment

Note: Only a member of this blog may post a comment.