ಇಂದು ಕೆಂದಾವರೆಯ...

-ಗೋಪಾಲ ಕೃಷ್ಣ ಅಡಿಗ
ಇಂದು ಕೆಂದಾವರೆಯ ದಳದಳಿಸಿ ದಾರಿಯಲಿ
ಗಂಧ ದೌತಣ ಹೋಗಿ ಬರುವ ಜನಕೆ ||

ಮಂದಮಾರುತ ಇರಲಿ ಮರಿದುಂಬಿ ಇರಲಿ
ಆನಂದವಿದೆ ಅತಿಥಿಗಳ ಕರೆಯಬೇಕೆ?

ನುಗುತಲಿದೆ ನೀರು ಹೊಂಬಿಸಿಲು ಕಚಗುಳಿ ಇಡಲು
ದುಂಬಿಗಳು ಒಲವನೆ ಗುಂಜಿಸಿರಲು
ನಾಚಿ ತಲೆ ಬಾಗಿಸಿತು ಕಮಲ
ದೂರದ ಬಾನ ದಾರಿಯಲಿ ಸ್ವಪ್ತಶ್ವವೇರಿಬಹನು

ತನ್ನ ಕೈ ಕೈಯೊಳು ಒಲವು ಬಲೆಗಳನಿಟ್ಟು
ನೀರಿನಾಳ ದೊಳವನು ಬಿಂಬಿಸುವನು
ಮೈಮರೆತುದಾ ಪದ್ಮ ಪರಮೆಗಳ ಪರಿವಾರ
ಮಂಜಾಗಿ ಕರಗಿತ್ತು ಸುತ್ತ ಮುತ್ತ

ಇರುವ ದುಂಬಿಯ ಬಿಟ್ಟು ಬರುವ ನೇಸರ ಕರೆಗೆ
ಓ ಗೊಟ್ಟುದೋ ನನ್ನ ಕೆಂದಾವರೆ
ಬರುವ ಬಾಳಿನ ಕನಸು ರವಿಯಾಗಿ ಬಹುದೇನು
ಕಾಯಬೇಕು ಅದಕೆ ಎಲ್ಲಿವರೆಗೆ?

Video link:
http://www.youtube.com/watch?v=XzFLCnvkjNU
English lyrics:
http://www.madhurabhavageethegalu.blogspot.com/2012/06/indu-kendavareya.html

No comments:

Post a Comment

Note: Only a member of this blog may post a comment.