ಶಿವ ಮಂದಿರ / ಬಾ ಫಾಲ್ಗುಣ ರವಿ...

- ಕುವೆಂಪು
ಶಿವ ಮಂದಿರ ಸಮ ವನ ಸುಂದರ ಸುಮ ಶೃಂಗಾರದ ಗಿರಿ ಶೃಂಗಕೆ
ಬಾ ಫಾಲ್ಗುಣ ರವಿ ದರ್ಶನಕೆ ||

ಕುಂಕುಮ ಧೂಳಿಯ ದಿಟ್ಕಟ ವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿ ವಿಹಂಗಮ ಮಂಗಳ ರವ ರಸ ನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು ಹೊಂನನೆ ಹೊಯ್ ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆ ಹರಿಯಿಸಿ ರವಿ ದಯ ಮಾಡುವನು

ತೆರೆ ತೆರೆಯಾಗಿಹ ನೊರೆ ನೊರೆ ಕಡಲೆನೆ ನೋಡುವ ಕಣ್ ನೋಡುವ ವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳಿ ಸಮ ಹಿಮ ಬಾನ್ ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿ ಮನ ತಾನುರಿದುರಿದೇಳೆ
ಮರ ಗಿಡದಲಿ ಜಡದೊಡಲಲಿ ಇದೇಕೋ ಸ್ಪಂದಿಸುತಿದೆ ಭಾವ ಜ್ವಾಲೆ

ವರ್ಣನದಿಂದ್ರಿಯ ನಂದನವನು ದಾಣ್ತುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈ ಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೆಂದ್ರಿಯ ಸುಖ ನಿಧಿಯಲ್ಲಿ ಸರ್ವಾತ್ಮನ ಸನ್ನಿಧಿಯಲ್ಲಿ
ಸಕಲಾರಾಧನ ಸಾಧನ ಭೋಧನ ಅನುಭವ ರಸ ತಾನಹುದಲ್ಲಿ

Video link:
http://www.youtube.com/watch?v=sshNQoph7c8
English lyrics:
http://www.madhurabhavageethegalu.blogspot.com/2012/11/shiva-mandira-baa-phalguna.html

No comments:

Post a Comment

Note: Only a member of this blog may post a comment.